PM awas yojana 2024 karnataka apply online:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಒಂದು ಲೇಖನಿಯ ಮೂಲಕ ತಿಳಿಸುವುದೇನೆಂದರೆ ನೀವು ಕೇಂದ್ರ ಸರ್ಕಾರ ಕಡೆಯಿಂದ ಉಚಿತ ಮನೆ ಕಟ್ಟಿಸಿಕೊಳ್ಳಲು ಬಯಸುತ್ತಿದ್ದೀರಾ ಹಾಗಾದರೆ ನಿಮಗೆ ಭರ್ಜರಿ ಗುಡ್ ನ್ಯೂಸ್ ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಪಿಎಂ ಆವಾಸ್ ಯೋಜನೆಯ ಮೂಲಕ ಅರ್ಜಿ ಸಲ್ಲಿಸಿ ನೀವು ಉಚಿತ ಮನೆ ಪಡೆದುಕೊಳ್ಳಬಹುದು ಅಥವಾ ಮನೆ ಕಟ್ಟಿಸಿಕೊಳ್ಳಲು ಆರ್ಥಿಕ ನೆರವು ಈ ಒಂದು ಯೋಜನೆ ಮೂಲಕ ಪಡೆದುಕೊಳ್ಳಬಹುದು ಹಾಗಾಗಿ ಈ ಒಂದು ಲೇಖನಿಯ ಮೂಲಕ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಆದ್ದರಿಂದ ಈ ಲೇಖನಿಯನ್ನು ಪೂರ್ತಿಯಾಗಿ ಓದಿ
ಈ ಕಾರ್ಡ್ ಇದ್ದವರಿಗೆ ಹೊಸ ಬಿಪಿಎಲ್ ರೇಷನ್ ಕಾರ್ಡ್ 30 ದಿನದ ಒಳಗಡೆ ಸಿಗುತ್ತೆ, ಇಲ್ಲಿದೆ ಮಾಹಿತಿ
ಸ್ನೇಹಿತರೆ ಇದೇ ರೀತಿ ಸರ್ಕಾರಿ ಯೋಜನೆಗಳು ಹಾಗೂ ಕೇಂದ್ರ ಸರ್ಕಾರ ಜಾರಿಗೆ ತರುವ ಹಲವಾರು ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ನಮ್ಮ ಕರ್ನಾಟಕದಲ್ಲಿ ಜಾರಿರುವ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿವಿಧ ಸ್ಕಾಲರ್ಶಿಪ್ ಯೋಚನೆಗಳು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಸರ್ಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ. ಈ ರೀತಿ ಪ್ರತಿದಿನ ಪ್ರಮುಖ ಸುದ್ದಿಗಳನ್ನು ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು
(PM awas yojana 2024 karnataka apply online)..?
ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಬಡವರಿಗೆ ಹಾಗೂ ಹಿಂದುಳಿದ ವರ್ಗದವರಿಗೆ ಉಚಿತವಾಗಿ ಮನೆ ಕಟ್ಟಿಸಿಕೊಳ್ಳಲು ಹಾಗೂ ಮನೆ ಇಲ್ಲದಂತವರಿಗೆ ಮನೆ ಕಟ್ಟಿಸಿಕೊಳ್ಳಲು ಈ ಒಂದು ಯೋಜನೆ ಅಡಿಯಲ್ಲಿ ಆರ್ಥಿಕ ನೆರವು ನೀಡಲಾಗುತ್ತಿದೆ ಹಾಗಾಗಿ ನೀವು ಉಚಿತ ಮನೆ ಕಟ್ಟಿಸಿಕೊಳ್ಳಲು ಬಯಸುತ್ತಿದ್ದರೆ ನೀವು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಆರ್ಥಿಕ ನೆರವು ಪಡೆಯಬಹುದು
ಹೌದು ಸ್ನೇಹಿತರೆ ಈ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಕೇಂದ್ರ ಸರ್ಕಾರ 2016ರಲ್ಲಿ ಜಾರಿಗೆ ತಂದಿದೆ ಮುಂದೆ ಬರುವಂತ ಐದು ವರ್ಷಗಳಲ್ಲಿ ಈ ಯೋಜನೆ ಅಡಿಯಲ್ಲಿ ಮೂರು ಕೋಟಿ ಮನೆ ನಿರ್ಮಾಣ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಹೀಗೆಂದು ನಮ್ಮ ಆರ್ಥಿಕ ಸಚಿವೆ ನಿರ್ಮಲ ಸೀತಾರಾಮನ್ ಅವರು ಬಜೆಟ್ ಮಂಡನೆ ವೇಳೆ ಹೇಳಿದ್ದಾರೆ ಹಾಗಾಗಿ ಈ ಯೋಜನೆ ಅಡಿಯಲ್ಲಿ ಈಗ ಅರ್ಜಿ ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿತ್ತು ಆಸಕ್ತಿ ಇರುವವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು
ಎಷ್ಟು ಆರ್ಥಿಕ ನೆರವು ಸಿಗುತ್ತದೆ (PM awas yojana 2024 karnataka apply online)..?
ಸ್ನೇಹಿತರೆ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಿದಂತ ಫಲಾನುಭವಿಗಳಿಗೆ 1,70,000 ಇಂದ 2,67000 ವರೆಗೆ ಈ ಯೋಜನೆ ಅಡಿಯಲ್ಲಿ ಆರ್ಥಿಕ ನೆರವು ಪಡೆಯಬಹುದು ಹಾಗಾಗಿ ಈ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಎರಡು ಭಾಗಗಳಾಗಿ ವರ್ಗಿಕರಣ ಮಾಡಲಾಗಿದೆ ಮೊದಲನೇದಾಗಿ ಗ್ರಾಮೀಣ ಪಟ್ಟಿ ಹಾಗೂ ನಗರ ಪಟ್ಟಿ
ಗ್ರಾಮೀಣ ಪಟ್ಟಿ:- ಸ್ನೇಹಿತರೆ ಈ ಗ್ರಾಮೀಣ ಪಟ್ಟಿಯಲ್ಲಿ ಗ್ರಾಮೀಣ ಭಾಗದಲ್ಲಿ ವಾಸ ಮಾಡುವಂತಹ ಜನರು ಹಾಗೂ ಗುಡ್ಡಗಾಡುಗಳಲ್ಲಿ ವಾಸ ಮಾಡುವಂತಹ ಜನರು ಮತ್ತು ಬುಡಕಟ್ಟು ಜನರು ಹಾಗೂ ಹಿಂದುಳಿದ ವರ್ಗದವರು ಮತ್ತು ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುವಂಥವರು ಈ ಗ್ರಾಮೀಣ ಪಟ್ಟಿಯಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ ಮತ್ತು ಈ ಗ್ರಾಮೀಣ ಪಟ್ಟಿಯಲ್ಲಿ ಅರ್ಜಿ ಸಲ್ಲಿಸಿದಂತ ಪಾಲನೆಗಳಿಗೆ ರೂ.1,70,000 ವರೆಗೆ ಮನೆ ಕಟ್ಟಿಸಿಕೊಳ್ಳಲು ಆರ್ಥಿಕ ನೆರವು ಈ ಯೋಜನೆ ಅಡಿಯಲ್ಲಿ ಸಿಗುತ್ತದೆ
ನಗರ ಪಟ್ಟಿ:- ಸ್ನೇಹಿತರೆ ನಗರ ಪ್ರದೇಶದಲ್ಲಿ ವಾಸ ಮಾಡುವಂತಹ ಜನರು ಹಾಗೂ ಅಸಂಘಟಿತ ವಲಯದ ಕಾರ್ಮಿಕರು ಮತ್ತು ಕೂಲಿಕಾರ್ಮಿಕರು ಹಾಗೂ ಬಾಡಿಗೆ ಮನೆಯಲ್ಲಿ ವಾಸ ಮಾಡುವಂಥ ಜನರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು ಒಟ್ಟಿನಲ್ಲಿ ಹೇಳುವುದಾದರೆ ನಗರ ಪ್ರದೇಶದಲ್ಲಿ ವಾಸ ಮಾಡುವಂತಹ ಜನರು ಈ ನಗರ ಪಟ್ಟಿಯಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ ಈ ನಗರ ಪಟ್ಟಿಯಲ್ಲಿ ಅರ್ಜಿ ಸಲ್ಲಿಸಿದಂತಹ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 2,67000 ವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ
ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು (PM awas yojana 2024 karnataka apply online)..?
ಆದಾಯ ಮಿತಿ:- ಸ್ನೇಹಿತರೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವ ಕುಟುಂಬಗಳು ವಾರ್ಷಿಕವಾಗಿ 2.50 ಲಕ್ಷ ರೂಪಾಯಿ ಒಳಗಡೆ ಕುಟುಂಬದ ಆದಾಯ ಹೊಂದಿರಬೇಕು ಅಂತವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಹಾಗೂ ಮಧ್ಯಮ ವರ್ಗದವರಿಗೆ 6 ಲಕ್ಷ ರೂಪಾಯಿ ವಾರ್ಷಿಕ ಆದಾಯ ಕ್ಕಿಂತ ಕಡಿಮೆ ಇರಬೇಕು
ವಯೋಮಿತಿ:- ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮೇಲ್ಪಟ್ಟು ಹಾಗೂ ಗರಿಷ್ಠ 59 ವರ್ಷದ ಒಳಗಿನವರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು ಹಾಗೂ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಭಾರತದ ನಿವಾಸಿಯಾಗಿರಬೇಕು
ಇಂಥವರಿಗೆ ಮೊದಲ ಆದ್ಯತೆ:- ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದಂತ ಅವರ ಪೈಕಿ ಅಂಗವಿಕಲರು ಹಾಗೂ ವಿಧವೆಯರು, ಹಿರಿಯ ನಾಗರಿಕರಿಗೆ, ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದರೆ ಇಂಥವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ
ಇತರ ಅರ್ಹತೆಗಳು:- ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಉಚಿತ ಮನೆ ಪಡೆದುಕೊಳ್ಳಲು ಬಯಸುವಂಥ ಫಲಾನುಭವಿಗಳು ಈ ಹಿಂದೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಯಾವುದೇ ಉಚಿತ ಮನೆ ಯೋಜನೆಯ ಸೌಲಭ್ಯ ಪಡೆದಿರಬಾರದು
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು (PM awas yojana 2024 karnataka apply online)..?
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಮೊಬೈಲ್ ನಂಬರ್
- ಇತ್ತೀಚಿನ ಭಾವಚಿತ್ರ
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಇತರ ಅಗತ್ಯ ದಾಖಲಾತಿಗಳು
ಅರ್ಜಿ ಸಲ್ಲಿಸುವುದು ಹೇಗೆ (PM awas yojana 2024 karnataka apply online)..?
ಸ್ನೇಹಿತರೆ ನೀವು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಉಚಿತ ಮನೆ ಕಟ್ಟಿಸಿಕೊಳ್ಳಲು ಬಯಸುತ್ತಿದ್ದರೆ ನೀವು ನಿಮಗೆ ಹತ್ತಿರವಿರುವಂತಹ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, CSC ಕೇಂದ್ರಗಳಿಗೆ ಭೇಟಿ ನೀಡಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು ಅಥವಾ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಲಿಂಕ್ ಕೆಳಗಡೆ ನೀಡಿದ್ದೇವೆ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಸ್ನೇಹಿತರ ಮೇಲೆ ಕೊಟ್ಟಿರುವಂತ ಲಿಂಕ್ ಬಳಸಿಕೊಂಡು ನೀವು ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಬಹುದು ಮತ್ತು ಇದೇ ರೀತಿ ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಪ್ರತಿದಿನ ಹೊಸ ಹೊಸ ಸುದ್ದಿಗಳನ್ನು ತಿಳಿಯಲು WhatsApp telegram ಗ್ರೂಪುಗಳಿಗೆ ಜಾಯಿನ್ ಆಗಬಹುದು