anna bhagya dbt status:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ಅನ್ನಭಾಗ್ಯ ಯೋಜನೆಯ ಸೆಪ್ಟೆಂಬರ್ ತಿಂಗಳ ಹಾಗೂ ಅಕ್ಟೋಬರ್ ತಿಂಗಳ ಅಕ್ಕಿ ಹಣ ಯಾವಾಗ ಜಮಾ ಆಗುತ್ತದೆ ಹಾಗೂ ಅಕ್ಕಿ ಹಣದ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಮತ್ತು ಹಣ ಬಂದಿಲ್ಲ ಅಂದರೆ ಏನು ಮಾಡಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ ಆದ್ದರಿಂದ ಈ ಲೇಖನಿಯನ್ನು ಕೊನೆಯವರೆಗೂ ಓದಲು ಪ್ರಯುಕ್ತ ಮಾಡಿ
ಕರ್ನಾಟಕ ವಿದ್ಯುತ್ ಇಲಾಖೆ ನೇಮಕಾತಿ..! ಹತ್ತನೇ ತರಗತಿ ಪಾಸಾದವರು ಈ ರೀತಿ ಅರ್ಜಿ ಸಲ್ಲಿಸಿ
ಸ್ನೇಹಿತರೆ ಇದೇ ರೀತಿ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವಂತ ಅನ್ನಭಾಗ್ಯ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆ ಮತ್ತು ಗೃಹ ಜ್ಯೋತಿ ಹಾಗೂ ಶಕ್ತಿ ಯೋಜನೆ ಮತ್ತು ಯುವನಿಧಿ ಮುಂತಾದ ಯೋಜನೆಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು ಹಾಗೂ ಮಹಿಳೆಯರಿಗೆ ಸಂಬಂಧಿಸಿದ ಯೋಜನೆಗಳು ಮತ್ತು ರೈತರಿಗೆ ಸಂಬಂಧಿಸಿದ ಯೋಜನೆಗಳು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳು ಮತ್ತು ಖಾಸಗಿ ಕಂಪನಿಗಳು ನೀಡುವ ವಿವಿಧ ವಿದ್ಯಾರ್ಥಿ ವೇತನಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು ಹಾಗೂ ನಮ್ಮ ಕರ್ನಾಟಕದ ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳು ಮತ್ತು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಬಿಡುಗಡೆ ಮಾಡುವ ವಿವಿಧ ಸರಕಾರಿ ಹುದ್ದೆಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು
ಅನ್ನಭಾಗ್ಯ ಯೋಜನೆ (anna bhagya dbt status)..?
ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಅನ್ನ ಭಾಗ್ಯ ಯೋಜನೆ ನಮ್ಮ ಕರ್ನಾಟಕದಲ್ಲಿ ಸಾಕಷ್ಟು ಪ್ರಚಾರ ಪಡೆದಿದೆ ಹಾಗೂ ಸಾಕಷ್ಟು ಜನರಿಗೆ ಈ ಒಂದು ಯೋಜನೆ ತುಂಬಾ ಅನುಕೂಲವಾಗಿದೆ ಏಕೆಂದ್ರೆ ಈ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಹಾಗೂ ರಾಜ್ಯ ಸರ್ಕಾರ ೫ ಕೆಜಿ ಅಕ್ಕಿ ಹಣವನ್ನು ಉಚಿತವಾಗಿ ನೀಡುತ್ತಿದೆ ಆದ್ದರಿಂದ ಇದು ಬಡವರಿಗೆ ಇಷ್ಟವಾದ ಯೋಜನೆ ಹಾಗೂ ಒಂದು ವರದಾನ ಎಂದು ಹೇಳಬಹುದು
ಸ್ನೇಹಿತರೆ ಈ ಅನ್ನಭಾಗ್ಯ ಯೋಜನೆಯನ್ನು ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಈ ಐದು ಗ್ಯಾರಂಟಿಗಳಲ್ಲಿ ಅನ್ನ ಭಾಗ್ಯ ಯೋಜನೆ ಒಂದಾಗಿದ್ದು ಈ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬ ಸದಸ್ಯರಿಗೆ ಅಥವಾ ರೇಷನ್ ಕಾರ್ಡ್ ನಲ್ಲಿರುವಂತ ತಲಾ ಒಬ್ಬ ಸದಸ್ಯರಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿತ್ತು ಅದೇ ರೀತಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದೆ
ಹೌದು ಸ್ನೇಹಿತರೆ ಅಕ್ಕಿ ಆಭಾವದಿಂದ ಕಾಂಗ್ರೆಸ್ ಪಕ್ಷವು 5 ಕೆಜಿ ಕೇಂದ್ರ ಸರ್ಕಾರ ನೀಡುತ್ತಿರುವಂತ ಅಕ್ಕಿಯ ಹೊರತಾಗಿ ಇನ್ನುಳಿದ ಐದು ಕೆಜಿ ಅಕ್ಕಿಗೆ ಅಂದರೆ ಪ್ರತಿ ಕೆಜಿಗೆ 34 ರೂಪಾಯಿಯಂತೆ 5 ಕೆಜಿಗೆ 170 ಹಣವನ್ನು ರೇಷನ್ ಕಾರ್ಡ್ ನಲ್ಲಿ ಇರುವಂತಹ ಕುಟುಂಬದ ಮುಖ್ಯಸ್ಥರ ಖಾತೆಗೆ ಪ್ರತಿ ತಿಂಗಳು ವರ್ಗಾವಣೆ ಮಾಡುತ್ತಾ ಬಂದಿದೆ ಹಾಗಾಗಿ ಇದುವರೆಗೂ ಸಾಕಷ್ಟು ಜನರು ಜುಲೈ ಹಾಗೂ ಸೆಪ್ಟೆಂಬರ್ ತಿಂಗಳ ಅಕ್ಕಿ ಹಣವನ್ನು ಪಡೆದುಕೊಂಡಿದ್ದಾರೆ ಮತ್ತು ಅಕ್ಟೋಬರ್ ತಿಂಗಳ ಹಣ ಯಾವಾಗ ಜಮಾ ಆಗುತ್ತದೆ ಎಂದು ಕಾಯುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ವರ ಬಂದಿದೆ
ಅಕ್ಟೋಬರ್ ತಿಂಗಳ ಅಕ್ಕಿ ಹಣ ಯಾವಾಗ ಜಮಾ (anna bhagya dbt status)..?
ಹೌದು ಸ್ನೇಹಿತರೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಇಲ್ಲಿವರೆಗೂ ಅರ್ಜಿದಾರರು ಸುಮಾರು 13 ಕಂತಿನ ಹಣ ಅಂದರೆ ಸೆಪ್ಟೆಂಬರ್ ತಿಂಗಳವರೆಗೆ ಈ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಎಲ್ಲಾ ಫಲಾನುಭವಿಗಳು ತಮ್ಮ ಖಾತೆಗೆ ಹಣ ಪಡೆದುಕೊಂಡಿದ್ದಾರೆ ಮತ್ತು ಕೆಲವರ ಖಾತೆಗೆ ಇನ್ನೂ ಜುಲೈ ಹಾಗೂ ಸೆಪ್ಟೆಂಬರ್ ಮತ್ತು ಅಕ್ಟೋಬರ್ ಮತ್ತು ಇತರ ಐದರಿಂದ ಏಳು ಕಂತಿನ ಹಣ ಜಮಾ ಆಗಿಲ್ಲ ಅಂತವರು ಏನು ಮಾಡಬೇಕು ಎಂದು ಈ ಲೇಖನಿಯ ಮುಂದಿನ ಭಾಗದಲ್ಲಿ ತಿಳಿಸಲಾಗಿದೆ
ಸ್ನೇಹಿತರೆ ಇವಾಗ ವಿಷಯಕ್ಕೆ ಬರೋದಾದ್ರೆ ಅಕ್ಟೋಬರ್ ತಿಂಗಳ ಹಣ ಅಂದರೆ 14ನೇ ಕಂತಿನ ಹಣ ಇದೆ ನವೆಂಬರ್ 14ನೇ ತಾರೀಖಿನಿಂದ ಪ್ರತಿಯೊಬ್ಬರ ಖಾತೆಗೆ ಅಕ್ಕಿ ಹಣ ಜಮಾ ಮಾಡಲಾಗುತ್ತದೆ ಎಂದು ನಮ್ಮ ಆಹಾರ ಇಲಾಖೆಯ ಸಚಿವರಾದಂತ ಕೆಎಚ್ ಮುನಿಯಪ್ಪನವರು ಮಾಹಿತಿ ತಿಳಿಸಿದ್ದಾರೆ ಹಾಗಾಗಿ ನಿಮಗೆ ಅಕ್ಕಿ ಹಣ ನವೆಂಬರ್ 14ನೇ ತಾರೀಖಿನಿಂದ ಜಮಾ ಆಗಲು ಪ್ರಾರಂಭವಾಗುತ್ತದೆ ಮತ್ತು ಪ್ರತಿಯೊಬ್ಬರ ಖಾತೆಗೆ ಹಣ ಜಮಾ ಆಗಲು ಈ ನವೆಂಬರ್ 30ನೇ ತಾರೀಕಿನ ತನ ಸಮಯ ತೆಗೆದುಕೊಳ್ಳುತ್ತದೆ ಹಾಗಾಗಿ ನೀವು ಹಣ ಜಮಾ ಆಗಿದ ಬಗ್ಗೆ ಪ್ರತಿದಿನ ಸ್ಟೇಟಸ್ ಚೆಕ್ ಮಾಡಬಹುದು ಅದು ಹೇಗೆ ಎಂದು ಕೆಳಗಡೆ ವಿವರಿಸಿದ್ದೇನೆ
ಹಣ ಬಂದಿಲ್ಲ ಅಂದರೆ ಏನು ಮಾಡಬೇಕು (anna bhagya dbt status)..?
ಹೌದು ಸ್ನೇಹಿತರೆ ಸಾಕಷ್ಟು ಜನರಿಗೆ ಅಕ್ಕಿ ಹಣ ಜಮಾ ಆಗುತ್ತಿಲ್ಲ ಇದಕ್ಕೆ ಪ್ರಮುಖ ಕಾರಣವೇನೆಂದರೆ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಅಂದರೆ ರೇಷನ್ ಕಾರ್ಡ್ ನಲ್ಲಿ ಇರುವಂತಹ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗಳಿಗೆ E-kyc ಮಾಡಿಸದೆ ಇರುವುದು ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸದೆ ಇರುವುದು ಮತ್ತು NPCI ಮ್ಯಾಪಿಂಗ್ ಮಾಡಿಸದೆ ಇರುವುದು ಪ್ರಮುಖ ಕಾರಣವಾಗಿರುತ್ತದೆ ಇದರ ಜೊತೆಗೆ ರೇಷನ್ ಕಾರ್ಡ್ ನಲ್ಲಿ ಇರುವ ಎಲ್ಲಾ ಕುಟುಂಬದ ಸದಸ್ಯರ ಈಕೆವೈಸಿ ಮಾಡಿಸಬೇಕು ಹಾಗೂ ಕುಟುಂಬದ ಮುಖ್ಯಸ್ಥೆ ಮಹಿಳೆಯಾಗಿರಬೇಕು ಈ ಎಲ್ಲಾ ಕೆಲಸ ಮಾಡಿದರೆ ನಿಮಗೆ ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಜಮಾ ಆಗುತ್ತೆ ಒಂದು ವೇಳೆ ಅಕ್ಕಿ ಹಣ ಜಮಾ ಆಗಿಲ್ಲ ಅಂದರೆ
ಹೌದು ಸ್ನೇಹಿತರೆ ಸಾಕಷ್ಟು ಜನರಿಗೆ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಇನ್ನು ಅಕ್ಕಿ ಹಣ ಜಮಾ ಆಗಿಲ್ಲ ಅಂತವರು ಏನು ಮಾಡಬೇಕು ಅಂದರೆ ನಿಮಗೆ ಸುಮಾರು 8 ಅಥವಾ 10 ತಿಂಗಳ ಅಕ್ಕಿ ಹಣ ಜಮಾ ಆಗಿಲ್ಲ ಅಂದರೆ ನೀವು ಕೂಡಲೇ ನಿಮಗೆ ಹತ್ತಿರವಿರುವಂತಹ ತಸಿಲ್ ಆಫೀಸಿಗಳಿಗೆ ಅಥವಾ ಆಹಾರ ಇಲಾಖೆಗೆ ಭೇಟಿ ನೀಡಿ ನಿಮಗೆ ಯಾವ ಕಾರಣಕ್ಕೆ ಹಣ ಜಮಾ ಆಗುತ್ತಿಲ್ಲ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು ಆದ್ದರಿಂದ ಕೂಡಲೇ ಭೇಟಿ ನೀಡಿ
ಅಕ್ಕಿ ಹಣದ ಸ್ಟೇಟಸ್ ಚೆಕ್ ಮಾಡುವುದು ಹೇಗೆ (anna bhagya dbt status)..?
ಸ್ನೇಹಿತರೆ ನೀವು ಅನ್ನಭಾಗ್ಯ ಯೋಜನೆಯ ಅಕ್ಕಿ ಹಣದ ಸ್ಟೇಟಸ್ ಚೆಕ್ ಮಾಡಲು ಬಯಸುತ್ತಿದ್ದರೆ ನೀವು ಮೊದಲು ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ Karnataka DBT status ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಿ
ಸ್ಟೇಟಸ್ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಂತರ ನೀವು ಈ ಅಪ್ಲಿಕೇಶನ್ ಓಪನ್ ಮಾಡಿ ಅನ್ನಭಾಗ್ಯ ಯೋಜನೆಯ ಫಾರಾನುಭವಿಯ ಆಧಾರ್ ಕಾರ್ಡ್ ನಂಬರ್ ಎಂಟರ್ ಮಾಡಿ ರಿಜಿಸ್ಟರ್ ಮಾಡಿಕೊಳ್ಳಿ ನಂತರ ಈ ಅಪ್ಲಿಕೇಶನ್ ಓಪನ್ ಮಾಡಿ
ಅಲ್ಲಿ ನಿಮಗೆ payment Status ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿದ ತಕ್ಷಣ ನಿಮಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹಣ ಜಮಾ ಆಗುವಂತ ಯೋಜನೆಗಳ ವಿವರ ಸಿಗುತ್ತದೆ ಅಲ್ಲಿ ನೀವು ಅನ್ನ ಭಾಗ್ಯ ಯೋಜನೆ ಎಂದು ಸೆಲೆಕ್ಟ್ ಮಾಡಿಕೊಳ್ಳಿ
ನಂತರ ನಿಮಗೆ ಇಲ್ಲಿವರೆಗೂ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಎಷ್ಟು ಕಂತಿನ ಹಣ ಜಮಾ ಆಗಿದೆ ಎಂಬ ಸಂಪೂರ್ಣ ವಿವರವೂ ನೋಡಲು ಸಿಗುತ್ತದೆ ಈ ರೀತಿ ನೀವು ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಸ್ಟೇಟಸ್ ಚೆಕ್ ಮಾಡಬಹುದು
ಸ್ನೇಹಿತರೆ ಈ ಮಾಹಿತಿಯನ್ನು ಆದಷ್ಟು ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಹಾಗೂ ನಿಮ್ಮ ಸ್ನೇಹಿತರಿಗೆ ಮತ್ತು ಅಕ್ಕಿ ಹಣ ಬರದೇ ಇರುವಂತಹ ಜನರಿಗೆ ಈ ಒಂದು ಲೇಖನೆಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು