ration card eligibility:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಹೊಸದಾಗಿ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಬಯಸುತ್ತಿದ್ದೀರಾ ಹಾಗಾದರೆ ನೀವು ಕಡ್ಡಾಯವಾಗಿ ನಮ್ಮ ರಾಜ್ಯ ಸರ್ಕಾರ ಜಾರಿಗೆ ತಂದಿರುವಂತ ಈ ಹೊಸ ರೂಲ್ಸ್ ಗಳನ್ನು ಪಾಲಿಸಬೇಕು ಅಂದರೆ ಮಾತ್ರ ನಿಮಗೆ ಹೊಸ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶವಿದೆ ಒಂದು ವೇಳೆ ಈ ರೂಲ್ಸ್ ಪಾಲಿಸದಿದ್ದರೆ ನಿಮ್ಮ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತದೆ ಆದ್ದರಿಂದ ಈ ಒಂದು ಲೇಖನಿಯಲ್ಲಿ ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರವನ್ನು ತಿಳಿದುಕೊಳ್ಳೋಣ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಸ್ನೇಹಿತರೆ ಇದೇ ರೀತಿ ರೇಷನ್ ಕಾರ್ಡ್ ಹಾಗೂ ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನ ಭಾಗ್ಯ ಯೋಜನೆ ಹಾಗೂ ನಮ್ಮ ಕರ್ನಾಟಕದಲ್ಲಿ ಜಾರಿರುವ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಪ್ರಚಲಿತ ಘಟನೆಗಳು ಮತ್ತು ಪ್ರಮುಖ ಸುದ್ದಿಗಳು ಹಾಗೂ ಸರಕಾರಿ ಹುದ್ದೆಗಳ ನೇಮಕಾತಿ ಕುರಿತು ಮತ್ತು ಖಾಸಗಿ ಕಂಪನಿಗಳಲ್ಲಿ ಖಾಲಿ ಹುದ್ದೆಗಳ ನೇಮಕಾತಿ ಕುರಿತು ಹಾಗೂ ಇತರ ಖಾಲಿ ಹುದ್ದೆಗಳ ಮಾಹಿತಿ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳು ಹಾಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು
ರೇಷನ್ ಕಾರ್ಡ್ (ration card eligibility)..?
ಸ್ನೇಹಿತರೆ ರೇಷನ್ ಕಾರ್ಡ್ ಇವತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರ ಯಾವುದೇ ಯೋಜನೆ ಜಾರಿಗೆ ತಂದರೆ ರೇಷನ್ ಕಾರ್ಡ್ (ration card eligibility) ಮಾನದಂಡವಾಗಿಟ್ಟುಕೊಂಡು ಜಾರಿಗೆ ತರಲಾಗುತ್ತದೆ ಅದರಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರನ್ನು ಬಡತನ ರೇಖೆಗಿಂತ ಕೆಳಗಿದ್ದವರು ಎಂದು ಗುರುತಿಸಲಾಗುತ್ತದೆ ಅಂದರೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ಹಾಗೂ ಅಂತೋದಯ ರೇಷನ್ ಕಾರ್ಡ್ ಹೊಂದಿದವರನ್ನು ಬಡವರು ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ
ಆದ್ದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬಡವರಿಗೆ ಉಪಯೋಗವಾಗಲು ಹಾಗೂ ಅವರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ ಮತ್ತು ಈ ಯೋಜನೆಗಳ ಲಾಭ ಪಡೆಯಬೇಕೆಂದರೆ ರೇಷನ್ ಕಾರ್ಡ್ ಹೊಂದುವುದು ಅತಿ ಮುಖ್ಯವಾಗುತ್ತದೆ ಹಾಗಾಗಿ ನೀವೇನಾದರೂ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳಲು ಬಯಸುತ್ತಿದ್ದರೆ ಹಾಗೂ ಈಗಾಗಲೇ ನಿಮ್ಮ ಹತ್ತಿರ ಬಿಪಿಎಲ್ ರೇಷನ್ ಕಾರ್ಡ್ ಇದ್ದರೆ ನೀವು ಕಡ್ಡಾಯವಾಗಿ ರಾಜ್ಯ ಸರ್ಕಾರ ನಿಗದಿ ಮಾಡಿರುವ ಈ ರೂಲ್ಸ್ ಗಳನ್ನು ಪಾಲಿಸಬೇಕು ಅಂದರೆ ಮಾತ್ರ ನಿಮಗೆ ಹೊಸದಾಗಿ ಬಿಪಿಎಲ್ ರೇಷನ್ ಕಾರ್ಡ್ ಸಿಗುತ್ತದೆ
ರೇಷನ್ ಕಾರ್ಡ್ ಪಡೆಯಲು ಇರುವ ಅರ್ಹತೆಗಳು (ration card eligibility)..?
ಆದಾಯ ಮಿತಿ:- ಸ್ನೇಹಿತರೆ ನೀವು ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಬಯಸಿದರೆ ಹಾಗೂ ಅಂತೋದಯ ರೇಷನ್ ಕಾರ್ಡ್ ಪಡೆಯಲು ಬಯಸಿದರೆ ಕಡ್ಡಾಯವಾಗಿ ನಿಮ್ಮ ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿ ಒಳಗಡೆ ಇರಬೇಕಾಗುತ್ತದೆ ಅಂದರೆ ಮಾತ್ರ ನೀವು ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಅರ್ಹತೆ ಹೊಂದಿರುತ್ತೀರಿ ಒಂದು ವೇಳೆ ನಿಮ್ಮ ಕುಟುಂಬದ ಆದಾಯ ಜಾಸ್ತಿ ಇದ್ದರೆ ನಿಮಗೆ ಬಿಪಿಎಲ್ ರೇಷನ್ ಕಾರ್ಡ್ ಸಿಗುವುದೆಲ್ಲ ಹಾಗೂ ಬಿಪಿಎಲ್ ರೇಷನ್ ಕಾರ್ಡ್ ಒಂದಿದ್ದರೆ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತದೆ
ಜಮೀನು ಹಾಗೂ ವಾಸ ಮಾಡುವ ಸ್ಥಳ:- ಸ್ನೇಹಿತರೆ ಹೊಸದಾಗಿ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಬಯಸುವಂತ ಕುಟುಂಬಗಳು 3 ಹೆಕ್ಟರ್ ಭೂ ಪ್ರದೇಶಕ್ಕಿಂತ ಕಡಿಮೆ ಭೂಮಿಯನ್ನು ನೀರಾವರಿ ಅಥವಾ ಒಣ ಬೇಸಾಯ ಭೂಮಿ ಹೊಂದಿರಬೇಕಾಗುತ್ತದೆ ಹಾಗೂ ನಗರ ಪ್ರದೇಶದಲ್ಲಿ ವಾಸ ಮಾಡುವಂಥ ಜನರು 100 ಚದರ್ ಮೀಟರ್ ಗಿಂತ ಕಡಿಮೆ ಜಾಗ ಅಥವಾ ಪ್ಲಾಟ್ ಹೊಂದಿರಬೇಕಾಗುತ್ತದೆ ಅಂದರೆ ಮಾತ್ರ ನಿಮಗೆ ಹೊಸದಾಗಿ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ
ಆದಾಯ ತೆರಿಗೆ ಪಾವತಿ:- ಸ್ನೇಹಿತರೆ ನೀವೇನಾದರೂ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದಾರೆ ಹಾಗೂ GST ಕಟ್ಟುತ್ತಿದ್ದರೆ ನೀವು ಹೊಸದಾಗಿ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಸಾಧ್ಯವಿಲ್ಲ ಒಂದು ವೇಳೆ ಬಿಪಿಎಲ್ ರೇಷನ್ ಕಾರ್ಡ್ ಬಂದಿದ್ದರೆ ನಿಮ್ಮ ರೇಷನ್ ಕಾರ್ಡ್ಗಳನ್ನು ಶೀಘ್ರದಲ್ಲಿ ರದ್ದು ಮಾಡಲಾಗುತ್ತದೆ ಏಕೆಂದರೆ ಬಿಪಿಎಲ್ ರೇಷನ್ ಕಾರ್ಡನ್ನು ಕೇವಲ ಬಡತನ ರೇಖೆಗಿಂತ ಕೆಳಗಿರುವವರಿಗೆ ಮಾತ್ರ ನೀಡಲಾಗುತ್ತದೆ
ಟ್ಯಾಕ್ಟರ್ ಹಾಗೂ ವೈಟ್ ಬೋರ್ಡ್ ಕಾರು:- ಹೌದು ಸ್ನೇಹಿತರೆ 10 ಲಕ್ಷ ರೂಪಾಯಿ ಬೆಲೆ ಬಾಳುವ ಟ್ರ್ಯಾಕ್ಟರ್ ಹಾಗೂ ಸ್ವಂತ ಕಾರು ಅಂದರೆ ವೈಟ್ ಬೋರ್ಡ್ ಕಾರ್ ನೀವು ಹೊಂದಿದ್ದರೆ ನಿಮಗೆ ಹೊಸದಾಗಿ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಸಾಧ್ಯವಿಲ್ಲ ಒಂದು ವೇಳೆ ನಿಮ್ಮ ಹತ್ತಿರ ಬಿಪಿಎಲ್ ರೇಷನ್ ಕಾರ್ಡ್ ಇದ್ದರೆ ನಿಮ್ಮ ರೇಷನ್ ಕಾರ್ಡ್ ಶೀಘ್ರದಲ್ಲಿ ರದ್ದು ಮಾಡಲಾಗುತ್ತದೆ
ಸರಕಾರಿ ನೌಕರಿದಾರರು:- ಹೌದು ಸ್ನೇಹಿತರೆ, ಬಿಪಿಎಲ್ ರೇಷನ್ ಕಾರ್ಡ್ ಹೊಂದಿದಂತ ಕುಟುಂಬಗಳಲ್ಲಿ ಅಥವಾ ಹೊಸದಾಗಿ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಬಯಸುವಂತಹ ಕುಟುಂಬಗಳು ಅಥವಾ ಕುಟುಂಬದಲ್ಲಿ ಯಾವ ಒಬ್ಬ ವ್ಯಕ್ತಿ ಅಥವಾ ಸದಸ್ಯರು ಸರಕಾರಿ ನೌಕರಿ ಒಂದಿದ್ದರೆ ಅಂತವರಿಗೆ ಹೊಸದಾಗಿ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಬರುವುದಿಲ್ಲ ಮತ್ತು ಒಂದು ವೇಳೆ ರೇಷನ್ ಕಾರ್ಡ್ ಬಂದಿದ್ದರೆ ರೇಷನ್ ಕಾರ್ಡ್ ರದ್ದು ಮಾಡಲಾಗುತ್ತದೆ
ರೇಷನ್ ಕಾರ್ಡ್ ರದ್ದು ಆಗಬಾರದು ಅಂದರೆ ಏನು ಮಾಡಬೇಕು (ration card eligibility)..?
ಹೌದು ಸ್ನೇಹಿತರೆ ನಮ್ಮ ರಾಜ್ಯ ಸರ್ಕಾರವು ಪ್ರಸ್ತುತ 13 ಲಕ್ಷಕ್ಕಿಂತ ಹೆಚ್ಚು ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲು ಮುಂದಾಗಿದ್ದು ನಿಮ್ಮ ರೇಷನ್ ಕಾರ್ಡ್ ರದ್ದು ಆಗಬಾರದು ಎಂದರೆ ಮೇಲೆ ತಿಳಿಸಿರುವ ಪ್ರತಿಯೊಂದು ರೂಲ್ಸ್ ಗಳನ್ನು ಹಾಗೂ ನಿಮ್ಮ ಹತ್ತಿರ ಬಿಪಿಎಲ್ ರೇಷನ್ ಕಾರ್ಡ್ ಇದ್ದರೆ ನೀವು ಮೇಲೆ ನೀಡಿದಂತಹ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಅಂದರೆ ಮಾತ್ರ ನಿಮ್ಮ ರೇಷನ್ ಕಾರ್ಡ್ ರದ್ದು ಆಗುವುದಿಲ್ಲ
ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಹಾಗೂ ರೇಷನ್ ಕಾರ್ಡ್ ಪಡೆಯಲು ಬಯಸುವಂತಹ ಜನರಿಗೆ ಮತ್ತು ಬಿಪಿಎಲ್ ರೇಷನ್ ಕಾರ್ಡ್ ಹೊಂದಿದಂತ ಕುಟುಂಬಗಳಿಗೆ ಈ ಒಂದು ಲೇಖನೆಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು